ಬೆಂಗಳೂರಲ್ಲಿ ಸಚಿನ್ ಅವರ ಕ್ರಿಕೆಟ್ ಗೇಮ್ ಲೋಕಾರ್ಪಣೆ | Oneindia Kannada

2017-12-08 349

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬಹು ನಿರೀಕ್ಷಿತ ಗೇಮ್ 'ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್' ಬೆಂಗಳೂರಿನಲ್ಲಿ ಗುರುವಾರದಂದು ಲೋಕಾರ್ಪಣೆ ಮಾಡಿದರು. ಡಿಜಿಟಲ್ ಎಂಟರ್ ಟೈನ್ಮೆಂಟ್ ಹಾಗೂ ಗೇಮಿಂಗ್ ಕಂಪನಿ ಜೆಟ್ ಸಿಂಥೆಸಿಸ್ ವಿನ್ಯಾಸಗೊಳಿಸಿರುವ ಈ ಗೇಮ್ ಸಚಿನ್ ಅವರ ಅಧಿಕೃತ ಗೇಮಿಂಗ್ ಅಪ್ಲಿಕೇಷನ್ ಆಗಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ಅವರ ಆಟದ ಅನುಭವ ಪಡೆಯಬಹುದು. ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್' ಅಧಿಕೃತ ಮೊಬೈಲ್ ಗೇಮಿಂಗ್ ಆಪ್ ಲೋಕಾರ್ಪಣೆ ಮಾಡಿದ ಸಚಿನ್ ಅವರು ಮಾತನಾಡಿ. ಆಟದ ಜತೆಗೆ ನನ್ನ ಜೀವನ ಪಯಣವನ್ನು ಹತ್ತಿರದಿಂದ ಕಾಣಲು ಎಲ್ಲಾ ಅಭಿಮಾನಿಗಳಿಗೆ ಇದು ಸೂಕ್ತವಾದ ವೇದಿಕೆ ಒದಗಿಸಲಿದೆ. ಎಲ್ಲಾ ಬಗೆಯ ಫೋನ್ ಗಳಲ್ಲಿ ಈ ಗೇಮ್ ಆಡುವಂತೆ ಇರಬೇಕು ಎಂದು ಕೇಳಿಕೊಂಡಿದ್ದೆ. ಅದರಂತೆ ವಿನ್ಯಾಸಗೊಳಿಸಲಾಗಿದೆ ಎಂದರು.

‘Sachin Saga Cricket Champions’ official mobile game of Sachin is all set to relive moments from Sachin Tendulkar’s journey as a cricketer

Videos similaires